ಬಡವನ ಪ್ರೀತಿ
(ಪ್ರೀತಿಯಲ್ಲಿ ನೊಂದು ಬೆಂದ, ಹುಬ್ಳಿ ಹುಡುಗನ ಹಾಡು)
(ಪ್ರೀತಿಯಲ್ಲಿ ನೊಂದು ಬೆಂದ, ಹುಬ್ಳಿ ಹುಡುಗನ ಹಾಡು)
ಗಮನಿಸಬೇಡಿ: ಈ ಹಾಡನ್ನು ರಾಜ್ಕುಮಾರ್ ಭಾರತಿ ಅವರು 'ಪ್ರೇಮ ತರಂಗ' ಚಿತ್ರಕ್ಕೆ ಹಾಡಿರುವ ರಾಗದಲ್ಲಿ ಗುನುಗಿ.
ನೀ ಹಿಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಬ್ಯಾಡ ನನ್ನ,
ನೀ ಹೀಂಗ ನೋಡಿದರೆ ನನ್ನ,
ತಿರುಗ ನಿಮ್ಮಪ್ಪ ಹೊಡಿತಾನ್ ನನ್ನ...
ಶ್ರೀಮಂತ ಹುಡುಗಿ ಅಂತ ತಿಳ್ದಿದ್ರು ನಾನು ಪ್ರೀತಿಸಿದೆ ನಿನ್ನ,
ಶ್ರೀಮಂತ ಹುಡುಗಿ ಅಂತ ತಿಳ್ದಿದ್ರು ನಾನು ಪ್ರೀತಿಸಿದೆ ನಿನ್ನ,
ನಿಮ್ಮಪ್ಪ ರೌಡೀನ್ ಇಟ್ಕೊಂಡ್ಅವ ಅಂತ ನಂಗ್ ಹ್ಯಾಂಗ್ ಗೊತ್ತಾಗ್ಬೇಕು ಚಿನ್ನ
ಹಂಗ ಮೊದ್ಲೇ ಗೂತ್ತಿದ್ರೆ ನಮ್ಮಪ್ಪನ್ ಆಣೆಗೂ ಪ್ರೀತಿಸ್ತಿರ್ಲಿಲ್ಲ ನಿನ್ನ
ನೀ ಹಿಂಗ ನೋಡಬ್ಯಾಡ ನನ್ನ,
ನೀ ಹಿಂಗ ನೋಡಿದರೆ ನನ್ನ ,
ನನ್ ಮೈಮೂಳೆ ಮುರಿದಾತ್ ಚಿನ್ನ..
ನನ್ ಜೇಬಿನ್ ರೊಕ್ಕ ನೀ ಖಾಲಿ ಮಾಡ್ತಿದ್ರೂ ನಾನ್ ಆಗಿದ್ದೆ ಆಗ ಬೆಪ್ಪ,
ನನ್ ಜೇಬಿನ್ ರೊಕ್ಕ ನೀ ಖಾಲಿ ಮಾಡ್ತಿದ್ರೂ ನಾನ್ ಆಗಿದ್ದೆ ಆಗ ಬೆಪ್ಪ,
ಪಾಪದ ಹುಡುಗ ಕೈಗ್ ಸಿಕ್ಕವ ಅಂತ ಸರಿಯಾಗ್ ತದಕಿದ ನಿಮ್ಮಪ್ಪ ,
ಅಲ್ಲಾ ಬಡವರ್ ಮನಿ ಹುಡುಗ ಶ್ರೀಮಂತ ಹುಡುಗೀನ ಪ್ರೀತಿ ಮಾಡೋದೇ ತಪ್ಪಾ??
ನೀ ಹೀಂಗ ನೋಡಬ್ಯಾಡ ನನ್ನ,
ನೀ ಹೀಂಗ ನೋಡಿದರೆ ನನ್ನ,
ತಿರುಗ ನಿಮ್ಮಪ್ಪ ಹೊಡಿತಾನ್ ನನ್ನ...
ಗಮನಿಸಿ: ಮೇಲಿನ ಹಾಡಿನ ನಿಜವಾದ ಕರ್ತೃ ದ.ರಾ.ಬೇಂದ್ರೆ . ಬೇಂದ್ರೆಯವರ ಮಗ, ಸರಿಯಾಗಿ ಔಷಧೋಪಚಾರ ಇಲ್ಲದೆ ತೀರಿಹೋಗಿರುತ್ತಾನೆ. ಆಗ, ಅವರ ಹೆಂಡತಿಯ ನೋಟ ತಾಳಲಾರದೆ, ಮರಳಿ ಜೀವನೋತ್ಸಾಹ ಪಡೆಯುವ ಸಲುವಾಗಿ ಬರೆದ ಹಾಡು "ನೀ ಹಿಂಗ ನೋಡಬ್ಯಾಡ ನನ್ನ".
inna estu prathibe adagide nimali... munduvarisi... :)
ReplyDeleteGood one
ReplyDeleteNice.....
ReplyDelete