ತುಕಾಲಿರಾಮನ ತುಕುಡ
ತುಕಾಲಿರಾಮನ ತುಟಿ ಒಡೆದಿತ್ತು. ಇದನ್ನು ಗಮನಿಸಿದ ಅವನ ಸ್ನೇಹಿತ "ಮಗಾ.. Lipstick ಹಚ್ಚಿಕೋ.. ತುಟಿ ಸರಿ ಹೋಗುತ್ತೆ" ಅಂದ. ಅದಕ್ಕಿವನು "ನಾನು ನನ್ನ girlfriend ಗೆ ಇದನ್ನೇ ಹೇಳ್ತಿನಪ್ಪ.. ಆದ್ರೆ ಅವ್ಳು ನನ್ನ ಮಾತೆ ಕೇಳಲ್ಲ ಅಂತಾಳೆ "....
=====================================================================
ತುಕಾಲಿರಾಮ : (ಸ್ನೇಹಿತೆಗೆ) ನೀನು ಮಲಗಿದಾಗ ತುಂಬಾ ಚೆನಾಗಿ ಕಾನ್ಸ್ತಿಯ...
ಸ್ನೇಹಿತೆ: (ನಾಚುತ್ತ) ಹೌದಾ??!!.. ನಾನು ಅಷ್ಟು ಚೆನ್ನಾಗಿ ಕಾನ್ಸ್ತಿನ..
ತುಕಾಲಿರಾಮ: ಹೌದು.. ಯಾಕೇಂದ್ರೆ ಮುಖ ಮುಚ್ಕೊಂಡು ಮಲಗ್ತಿಯಲ್ಲ.. ಅದಕ್ಕೆ...
=====================================================================
ಪ್ರೇಮ ನಿವೇದನೆಗೆ ತಿಣುಕಾಡುತ್ತಿದ್ದ ಗೆಳೆಯನಿಗೆ ತುಕಾಲಿ ಕೊಟ್ಟ ಸಲಹೆ
"ಮಗಾ, I *some text missing* you ಅಂತ SMS ಕಳ್ಸು ಅವಳಿಗೆ.. Confuse ಆಗಿಹೋಗ್ತಾಳೆ”.
=====================================================================
According to ತುಕಾಲಿರಾಮ, only thing which is not mathematics is LIFE
==============================================================================
ಬುದ್ದಿವಾದ ಹೇಳೋದು ಮನುಷ್ಯನಿಗೆ ಇರೋ ಕೆಟ್ಟ ಚಟ. ಪ್ರೀತಿಯಲ್ಲಿ ಇರೋವ್ರಿಗೆ ಬುದ್ದಿವಾದ ಹೇಳೋದು ಹಾನಿಕಾರಕ!!!
==============================================================================
ತುಕಾಲಿರಾಮ girlfriend once asked him “Darling!! Do you love me?”
He took his wallet, looked into the money and replied “Yeah!!I can love you now”
==============================================================================
ತೆಳ್ಳಗಿದ್ದ ತನ್ನ ಸ್ನೇಹಿತನನ್ನು, ತರುಣಿಯರ ಹಿಂಡೊಂದು ದಿಟ್ಟಿಸಿ ನೋಡುತ್ತಿರುವುದನ್ನು ತುಕಾಲಿ ಗಮನಿಸಿದ
ತುಕಾಲಿ: ಮಗಾ, ಆಗ್ಲಿಂದ ಆ ಹುಡುಗೀರು ನಿನ್ನೆ ನೋಡ್ತಿದಾರೆ

ಸ್ನೇಹಿತ: (Collar ಮೇಲೆ ಮಾಡುತ್ತಾ) figure ಕಣೋ ನಾನು..
ತುಕಾಲಿ: ಸುಮ್ನಿರಪ್ಪ.. ನೀನು ನಮ್ಕಿಂತ slim ಇದ್ದೀಯ ಅಂತ ಅವ್ರು ನೋಡ್ತಿರೋದು ...
==============================================================================
ತುಕಾಲಿಯ ಕಾಲೆಳೆಯುವಂತೆ ಅವನ ಸ್ನೇಹಿತ : ತುಕಾಲಿ, ಒಂದು ಜೋಕ್ ಹೇಳಮ್ಮ..
ತುಕಾಲಿ: ರಾಘವೇಂದ್ರ ಪ್ರಸಾದ್.. ನೀನು ನೋಡೋಕೆ ಬಹಳ ಸುಂದರವಾಗಿದಿಯ.. ಜೋಕ್ ಮುಗೀತು

============================================================================================
ತುಕಾಲಿಯ ಮಗನ ಬಗ್ಗೆ ಶಾಲೆಯಲ್ಲಿ ದೂರು..
ಮುಖ್ಯೋಪಾಧ್ಯಾಯ: ಸರ್..ನಿಮ್ಮ ಮಗ ಯಾವಾಗಲೂ ಲಾಸ್ಟ್ ಬೆಂಚ್ ಅಲ್ಲಿ ಕೂತ್ಕೊತಾನೆ
ತುಕಾಲಿರಾಮ: ಇದು ನಿಮ್ದೆ ತಪ್ಪು ಸರ್.. ಲಾಸ್ಟ್ ಬೆಂಚ್ ಯಾಕೆ ಹಾಕಸ್ತಿರ ನೀವು???!!
ಮುಖ್ಯೋಪಾಧ್ಯಾಯ: ಸರ್..ನಿಮ್ಮ ಮಗ ಯಾವಾಗಲೂ ಲಾಸ್ಟ್ ಬೆಂಚ್ ಅಲ್ಲಿ ಕೂತ್ಕೊತಾನೆ
ತುಕಾಲಿರಾಮ: ಇದು ನಿಮ್ದೆ ತಪ್ಪು ಸರ್.. ಲಾಸ್ಟ್ ಬೆಂಚ್ ಯಾಕೆ ಹಾಕಸ್ತಿರ ನೀವು???!!
==============================================================================
ಕೊನೆಯ ಪರೀಕ್ಷೆಯ ಸಮಯದಲ್ಲಿ ತುಕಾಲಿಯ ಮಾತು
"ಥೂ!!ಈ last exam last ಅಲ್ಲೇ ಯಾಕ್ ಇದ್ತಾರೋಪ್ಪ.."
=====================================================================
Ragging ಸಮಯ:
ತುಕಾಲಿರಾಮ: ನಿನಗೆ ಯಾವ heroin ಕಂಡ್ರೆ ತುಂಬಾ ಇಷ್ಟ??
ಜೂನಿಯರ್: ಐಶ್ವರ್ಯ ರೈ
ತುಕಾಲಿರಾಮ: ಐಶ್ವರ್ಯ ರೈ ಅಲ್ಲಿ ಏನ್ ಇಷ್ಟ??
ಜೂನಿಯರ್: ಅವಳ ಕಣ್ಣು
ತುಕಾಲಿರಾಮ: ಅವಳು ಸತ್ತ ಮೇಲೆ ಅವಳ ಕಣ್ಣನ್ನ ಬೇರೆಯವರಿಗೆ ದಾನ ಮಾಡ್ತಾಳಂತೆ..ಹಾಗಿದ್ರೆ ಅವರನ್ನೂ ಇಷ್ಟ ಪಡ್ತೀಯ???
ಜೂನಿಯರ್: ಐಶ್ವರ್ಯ ರೈ
ತುಕಾಲಿರಾಮ: ಐಶ್ವರ್ಯ ರೈ ಅಲ್ಲಿ ಏನ್ ಇಷ್ಟ??
ಜೂನಿಯರ್: ಅವಳ ಕಣ್ಣು
ತುಕಾಲಿರಾಮ: ಅವಳು ಸತ್ತ ಮೇಲೆ ಅವಳ ಕಣ್ಣನ್ನ ಬೇರೆಯವರಿಗೆ ದಾನ ಮಾಡ್ತಾಳಂತೆ..ಹಾಗಿದ್ರೆ ಅವರನ್ನೂ ಇಷ್ಟ ಪಡ್ತೀಯ???
=====================================================================
ಸ್ನೇಹಿತ: (ವೇಗವಾಗಿ) ಲೋ, ನಾನು ಹುಡುಗೀರನ್ನ ಕಣ್ಣೆತ್ತಿ ಸಹ ನೋಡೋದಿಲ್ಲ
ತುಕಾಲಿರಾಮ : (ಅಷ್ಟೇ ವೇಗವಾಗಿ) ಹಾಗಿದ್ರೆ ಏನ್ ಎತ್ತಿ ನೋಡ್ತೀಯ???

=====================================================================================
ತುಕಾಲಿರಾಮ: ನಿನಗೆ ಗೊತ್ತ?? ೧೯೮೮ ಅಲ್ಲಿ ಜಗತ್ತಿನಾದ್ಯಂತ ಮಕ್ಕಳು ಹುಟ್ಟೋದು ತುಂಬಾ ಕಮ್ಮಿ ಆಗಿತ್ತಂತೆ
ಹೆಂಡತಿ: ಹೌದ??!! ಯಾಕೆ??
ತುಕಾಲಿರಾಮ: ಯಾಕೆಂದ್ರೆ, ಬ್ರಹ್ಮ ನಿನ್ನನ್ನ ತಯಾರಿ ಮಾಡೋದ್ರಲ್ಲಿ busy ಆಗಿಬಿಟ್ಟಿದ್ನಲ್ಲ.. ಅದಕ್ಕೆ
=====================================================================================
ತುಕಾಲಿರಾಮ: ಮಗಾ, ನೀನು commondos game ಆಡಿದಿಯ??
ಸ್ನೇಹಿತ: ಚಿಕ್ಕ ಮಕ್ಳ ಗೇಮ್ ಎಲ್ಲ ನಾನ್ ಆಡಲ್ಲ
ತುಕಾಲಿರಾಮ: ಓಹೋಹೋಹೋ.. ಏನ್ ಹುಟ್ಟುತಾನೆ ದೊಡ್ದವ್ನ್ ಆಗಿ ಹುಟ್ಟಿಬಿಟ್ಟಿದಿಯ ನೀನು

=====================================================================================================
ಸ್ನೇಹಿತ: ಹುಡುಗಿ ನನಗೆ ಸಿಕ್ಕಾಗ, ನನ್ನೊಳಗೆ ಘಂಟೆ ಹೊಡಿಬೇಕು.. ಆಗ ಅವಳೇ ನನ್ನವಳು ಅಂತ ಗೊತ್ತಾಗುತ್ತೆ
ತುಕಾಲಿರಾಮ: ದೇವಸ್ತಾನದಲ್ಲೋ ಚರ್ಚ್ ಅಲ್ಲೋ ಪ್ರಯತ್ನ ಮಾಡು.. ಘಂಟೆ ಹೊಡಿಯೋ chances ಜಾಸ್ತಿ ಇದೆ
============================================================================================
ಸ್ನೇಹಿತ: ಲೋ ತುಕಾಲಿ, ಇಷ್ಟೆಲ್ಲಾ ಸುಳ್ಳು ಹೇಳಬೇಡ ..ನಿನ್ನ ಪಾಪದ ಕೊಡ ತುಂಬಿಹೋಗುತ್ತೆ
ತುಕಾಲಿರಾಮ: ಲೋ, ನನ್ನ ಪಾಪದ ಕೊಡಕ್ಕೆ ತೂತು ಬಿದ್ದಿದ್ಯಮ್ಮ..ಪಾಪ ಮಾಡಿದ ಹಾಗೆಲ್ಲ ಅದು ಸೋರಿ ಹೋಗ್ತಾನೆ ಇರುತ್ತೆ
ತುಕಾಲಿರಾಮ: ಲೋ, ನನ್ನ ಪಾಪದ ಕೊಡಕ್ಕೆ ತೂತು ಬಿದ್ದಿದ್ಯಮ್ಮ..ಪಾಪ ಮಾಡಿದ ಹಾಗೆಲ್ಲ ಅದು ಸೋರಿ ಹೋಗ್ತಾನೆ ಇರುತ್ತೆ
=====================================================================================================
Once ತುಕಾಲಿರಾಮ gets an SMS from unknown number asking “who is this?” for which he promptly replies “It’s me”
=====================================================================
Sacrifice is just another word for losing
=====================================================================
ಮನಸ್ಸಿಗೆ ಇಷ್ಟವಿಲ್ಲದ ಕೆಲಸ ಹೊರಿಸುತ್ತಿದ್ದ ಮ್ಯಾನೇಜರ್ ಗೆ ತುಕಾಲಿಯ ವಕ್ರತುಂಡೋಕ್ತಿ..
You can slap from one hand; not clap
=====================================================================================
ತುಕಾಲಿರಾಮನ ಶಾಲೆಗೆ ಬಂದಿದ್ದ ಸ್ವಾಮೀಜಿ : ನಮ್ಮ ಗುರುಗಳು ನದಿ ನೀರಿನ ಮೇಲೆ ನಡೆಯುತ್ತಿದ್ದರು
ತುಕಾಲಿರಾಮ : ಯಾಕ್ ಸ್ವಾಮಿ? ಅವ್ರಿಗೆ ಈಜೋಕೆ ಬರ್ತಾ ಇರ್ಲಿಲ್ವಾ??
ತುಕಾಲಿರಾಮ : ಯಾಕ್ ಸ್ವಾಮಿ? ಅವ್ರಿಗೆ ಈಜೋಕೆ ಬರ್ತಾ ಇರ್ಲಿಲ್ವಾ??
=====================================================================================
ವಧುವಿನಲ್ಲಿ ಬಯಸುವ ಗುಣಗಳನ್ನ ಹೇಳುತ್ತಾ,
ಸ್ನೇಹಿತ: ಅವ್ಳು down to earth ಆಗಿ ಇರ್ಬೇಕು
ತುಕಾಲಿರಾಮ: ಅಂದ್ರೆ, ಅವ್ಳು ground floor ಅಲ್ಲಿ ಮನೆ ಮಾಡಿಕೊಂಡು ಇರ್ಬೇಕು ಅನ್ನು
============================================================================================
ನಾಸ್ತಿಕ: God ಇಲ್ಲ ಕಣೋ. ನೀನು ನೋಡಿದ್ಯೇನೋ ದೇವ್ರನ್ನ?? ಯಾರೋ God??
ತುಕಾಲಿರಾಮ: ಲೋ, ‘A’ film ನೋಡಿಲ್ವಾ?? ಉಪೇಂದ್ರ ಕಣೋ
============================================================================================
ತುಕಾಲಿರಾಮನ ಸ್ನೇಹಿತೆ , ಪ್ರತಿಭಾ, ಸುಮ್ ಸುಮ್ನೆ ನಗುವ ಸ್ವಭಾವದವಳು..
ತುಕಾಲಿರಾಮ: ಸುಮ್ ಸುಮ್ನೆ ನಗೊವ್ರಿಗೆ ಏನ್ ಅಂತಾರೆ ಗೊತ್ತ?
ಸ್ನೇಹಿತೆ: ಗೊತ್ತು.. ಹುಚ್ಚಿ ಅಂತಾರೆ
ತುಕಾಲಿರಾಮ: ಅಲ್ಲಾ.. ಪ್ರತಿಭಾ ಅಂತಾರೆ
ತುಕಾಲಿರಾಮ: ಸುಮ್ ಸುಮ್ನೆ ನಗೊವ್ರಿಗೆ ಏನ್ ಅಂತಾರೆ ಗೊತ್ತ?
ಸ್ನೇಹಿತೆ: ಗೊತ್ತು.. ಹುಚ್ಚಿ ಅಂತಾರೆ
ತುಕಾಲಿರಾಮ: ಅಲ್ಲಾ.. ಪ್ರತಿಭಾ ಅಂತಾರೆ
============================================================================================
ಸ್ನೇಹಿತ: ಛೆ!!! ಊರಿಗೆ ಹೋಗೋ ಕೊನೆ ಬಸ್ ಕೂಡ ತಪ್ಪಿ ಹೋಯ್ತು.. ಮನೇಲಿ ಫೋನ್ ಕೂಡ ಇಲ್ಲ.. ಹೇಗೋ ತುಕಾಲಿ ವಿಷ್ಯ ತಿಳಿಸಲಿ ಮನೆಗೆ??
ತುಕಾಲಿರಾಮ: ಸಿಂಪಲ್ ಮಗ.. ಪತ್ರ ಬರೆದು ಹಾಕು
ತುಕಾಲಿರಾಮ: ಸಿಂಪಲ್ ಮಗ.. ಪತ್ರ ಬರೆದು ಹಾಕು
============================================================================================
ಮನುಷ್ಯಂಗೆ ತುಂಬಾ ಭಯ ಹುಟ್ಟಿಸೋ ಪದ ಯಾವದು? "ನಾಳೆ".. ಸೋಜಿಗ ಅಂದ್ರೆ, ಮನುಷ್ಯಂಗೆ ತುಂಬಾ ಭರವಸೆ ಹುಟ್ಟಿಸೋ ಪದ ಕೂಡ "ನಾಳೆ"
============================================================================================
ತನ್ನಿಂದಲೇ ತನ್ನ ತಾಯಿ ತೀರಿಹೊದಳೆಂದು ತುಕಾಲಿರಾಮ ಸ್ನೇಹಿತ ರೋಧಿಸುತ್ತಿರುತ್ತಾನೆ.. ಆತನನ್ನು ಸಮಾಧಾನ ಪಡಿಸಲು ಎಲ್ಲಾ ಸ್ನೇಹಿತರು ವಿಫಲವಾದಾಗ ತುಕಾಲಿಯರಾಮನ ಪ್ರವೇಶ ಆಗುತ್ತದೆ..
"ಮಗ..ಒಂದ್ಸರಿ ಯಮದೇವನ ತಾಯಿ, ಯಮನಿಗೆ ಪ್ರಶ್ನೆ ಹಾಕ್ತಾಳೆ "ಮಗು, ಇಷ್ಟು ನಿಷ್ಕಾರುಣವಶವಾಗಿ ಅಷ್ಟೊಂದು ಜನರ ಪ್ರಾಣ ಹರಣ ಮಾಡ್ತಿಯಲ್ಲ? ಸತ್ತವರ ತಾಯಿ, ಮಗ, ನಂಬಿದವರ ಶಾಪ ನಿನಗೆ ತಟ್ಟುವುದಿಲ್ಲವೇ?".. ಅದಕ್ಕೆ ಯಮ "ಇಲ್ಲಾ ಅಮ್ಮ. ಹಾಗಾಗಲ್ಲ.. ಯಾರಾದ್ರು ಸತ್ತಲ್ಲಿ ಜನ, ಇವ್ನು ಅವಳ್ ಹಿಂದೆ ಹೋಗಿ ಸತ್ತ, ಕುಡಿತಿದ್ದ ಸತ್ತ, ಆ ಕಾಯಿಲೆಗೆ ಸರಿಯಾಗಿ ಔಷಧ ತಗೊಂಡಿಲ್ಲ ಅದಕ್ಕೆ ಸತ್ತ ಅಂತಾರೆ ಹೊರತು ಯಮ ಬಂದು ಪ್ರಾಣ ತಗೊಂಡು ಹೋದ ಅಂತ ಬಯ್ಯಲ್ಲ..ನಾನು safe" ಅಂದ.. ಸಾಯುವುದಕ್ಕೆ ಇದೇ ಕಾರಣ ಅಂತ ಇರಲ್ಲ.. ಅದು ನಿಶ್ತಿತವಾದ್ದು.. ಸಂಧರ್ಭಗಳು ಕೇವಲ ನೆಪ ಅಷ್ಟೇ"
ಸ್ನೇಹಿತ ಸ್ವಲ್ಪ ಸಮಾಧಾನಗೊಳ್ಳುತ್ತಾನೆ.
============================================================================================
ಕೆಲವೊಂದು ಹಿಟ್ ಸಿನಿಮಾ ನೋಡಿದ ಮೇಲೆ, ತುಕಾಲಿರಾಮ ವ್ಯಾಖ್ಯಾನ
· ಮಾನಸ ಸರೋವರ - ಹೆಂಡತಿ ಓಡಿಹೋದರು ಏನೂ ಆಗಲ್ಲ.. ಆದರೆ girlfriend ಕೈ ಕೊಟ್ರೆ ಹುಚ್ಚು ಹಿಡಿಯೋದು guarantee
· 3 Idiots - Strive for excellence. Yashashwini will follow
============================================================================================
ತುಕಾಲಿರಾಮ: ಶನಿವಾರ, ಭಾನುವಾರ ಸುಮ್ನೆ ದಂಡ ಆಗ್ತಿದೆ..ಏನಾದರೂ productive ಕೆಲಸ ಮಾಡಬೇಕು
ಸ್ನೇಹಿತ: ಮದುವೆ ಆಗ್ಬಿಡು ತುಕಾಲಿ
ತುಕಾಲಿರಾಮ: ನಾನ್ ಹೇಳಿದ್ದು productive ಕೆಲಸ ಮಾಡ್ಬೇಕು ಅಂತ.. Reproductive ಅಲ್ಲಾ..
ಸ್ನೇಹಿತ: ಮದುವೆ ಆಗ್ಬಿಡು ತುಕಾಲಿ
ತುಕಾಲಿರಾಮ: ನಾನ್ ಹೇಳಿದ್ದು productive ಕೆಲಸ ಮಾಡ್ಬೇಕು ಅಂತ.. Reproductive ಅಲ್ಲಾ..
============================================================================================
ಮೇಧಾವಿಯ ಹಾಗೆ ಮಾತಾಡುವ ಸ್ನೇಹಿತನ ಬಗ್ಗಿನ ತುಕಾಲಿಯ ಕುಚೋದ್ಯ
"ನೀನ್ ಮಾತಾಡಿದ್ರೆ Supreme Court ನ decision ಇದ್ಹಾಂಗೆ.. ಮೊದಲ್ನೇ ಸರಿ ಏನೂ ಅರ್ಥ ಆಗಲ್ಲ”..
============================================================================================
ತುಕಾಲಿರಾಮನ ದೃಷ್ಟಿಯಲ್ಲಿ ಸ್ವಾತಂತ್ರ್ಯ :
"ಹರಿಬಿಡೋದು ಸ್ವಾತಂತ್ರ್ಯ ಅಲ್ಲ; ಹತೋಟಿಯಲ್ಲಿ ಇಡೋದು ಸ್ವಾತಂತ್ರ್ಯ "

ಅಮರನಾಗುವ ಬಗ್ಗೆ ಉತ್ಸುಕನಾಗಿದ್ದ ತನ್ನ ಸಹದ್ಯೋಗಿ ಸೈನಿಕನಿಗೆ ---
"ಸಾಯೋದು ಮುಖ್ಯ ಅಲ್ಲ; ಸಾಧಿಸೋದು ಮುಖ್ಯ . ನೀನು ಸತ್ತರೆ, ಬರಿ ನಿನ್ನ ಸಾವು ಅಮರ ಆಗುತ್ತೆ; ನೀನು ಸಾಧಿಸಿದರೆ, ನಿನ್ನ ಸಾಧನೆ ಅಮರ ಆಗುತ್ತೆ "

ತುಕಾಲಿ : ಮದುವೆಗೆ ಒಂದು ಹೆಣ್ಣು ಹುಡುಕ್ಕೊಡೋ
ಸ್ನೇಹಿತ: ನಾನ್ ಏನ್ ಬ್ರೋಕರ್ ಕೆಟ್ಟ್ಹೋದ್ನ
ತುಕಾಲಿ : ಇದೊಳ್ಳೆ ಕಥೆ ಆಯ್ತು. ದಾರಿ ತೋರ್ಸೋಕೆ ಡ್ರೈವರ್ರೇ ಆಗ್ಬೇಕಾ ??

Nice ones dude....
ReplyDeletesakkath maga ;)
ReplyDeletethumba chenagi ide... :)
ReplyDeleteExcellent title.Fresh and hilarious jokes....Go ahead..Battalikeyinda innashtu baanagalu horabarali...
ReplyDeleteಚೆನ್ನಾಗಿವೆ ತುಣುಕುಗಳು.. differentಆಗಿ ಮುಂದುವರೀಲಿ..
ReplyDelete