Friday, August 24, 2012

ಸಲ್ಲಾಪ

ಸಲ್ಲಾಪ

ನಿನ್ನ ಕನಸಿನ ಯಾನಕೆ
ನಾನಾಗುವೆ ನಾವಿಕ
ನಿನ್ನ ಬಾಳಿನ ಬೀದಿಗೆ
ಎಂದೂ ಆರದ ದೀಪಕ
ನಿನ್ನ ಪ್ರೀತಿಹುದೊಂದೇ
ನನ್ನರಿವಿನ ಕಾಯಕ

ಮುಗಿಲಾಗುವೆ,
ನಿನ್ನುತ್ಸಾಹ ಚಿಮ್ಮಲು
ಹೆಗಲಾಗುವೆ
ನೀನಾಸರೆಯ ಬೇಕೆನಲು
ಸವಿಯಾಗುವೆ,
ಹೂನಗೆ ನೀ ಬೀರಲು
ಜೊತೆಯಾಗುವೆ,
ಸಂಗಾತವಾ ನೀ ಬಯಸಲು

ಹಸಿರಾಯ್ತು ಬದುಕು
ನೀ ನುಡಿದಾ ಘಳಿಗೆಯಲಿ
ಉಸಿರಾಯ್ತು ನಿನ ಹೆಸರು
ನೀನೊಲಿದಾ ನಿಮಿಷದಲಿ
ಮಗುವಾಯ್ತು ಮನಸು-
ಹಗುರಾಯ್ತು ಕನಸು
ಒರಗಿರಲು ನಾ ನಿನ್ನ
ಹಿತವಾದ ಮಡಿಲಿನಲಿ

No comments:

Post a Comment