Thursday, January 17, 2013

ಶಾಲೆಗೆ ಹೋಗೋಲ್ಲ ...

ಶಾಲೆಗೆ ಹೋಗೋಲ್ಲ ...

ಶಾಲೆಗೆ ಹೋಗೋಲ್ಲ 
ಅಮ್ಮಾ ಶಾಲೆಗೆ ಹೋಗೋಲ್ಲ ।।

ಊಟದ ಸಮಯದಿ ಹಠವನು ಮಾಡೆ,
ಸಲುಗೆಯ ಸಂಗದಿ ತಮ್ಮನ ದೂಡೆ,
ಸೊಗದಲಿ ನೀನು ಜೋಗುಳ ಹಾಡೆ- 
ಮಲಗುವೆ ನಿದ್ದೆಯ ಗೊಂಬೆಯ ಹಾಗೆ
ಶಾಲೆಗೆ ಹೋಗೋಲ್ಲ..ಆದರೆ, ಶಾಲೆಗೆ ಹೋಗೋಲ್ಲ ।।

ಶಾಲೇಲಿ ಯಾರೂ ಪರಿಚಯವಿಲ್ಲ 
ಕಂಬನಿ ಮಿಡಿವ ಮಕ್ಕಳೇ ಎಲ್ಲಾ 
ಆಟವ  ಆಡಲು ಬರದಿರುವವರು 
ಬೆತ್ತವ ಹಿಡಿದು ಗದರುವರಲ್ಲಾ !!!
 ಶಾಲೆಗೆ ಹೋಗೋಲ್ಲ..ಅಮ್ಮ ಶಾಲೆಗೆ ಹೋಗೋಲ್ಲ ।।

ಮಗುವೇ ಮಗುವೇ ಏತಕೆ ಅಳುವೇ 
ಕರೆಯಲು ನಿನ್ನನು ಬೇಗನೆ ಬರುವೆ 
ನಗುತಲಿ ನೀನು ಮನೆಗೆ ಬಂದರೆ 
ಸಿಹಿಯನು ಕೊಟ್ಟು ಮುತ್ತನು ಕೊಡುವೆ 
ಶಾಲೆಗೇ ಹೋಗಮ್ಮಾ ..ನೀನು ಶಾಲೆಗೇ ಹೋಗಮ್ಮಾ ।।

ಶಿಷ್ಟಾಚಾರವ ಕಲಿಯಲೇಬೇಕು 
ಪಾಠಶಾಲೆಗೆ ಹೋಗಲೇಬೇಕು 
ವಿದ್ಯೆ ವಿವೇಚನ ಬುದ್ದಿಯ ಕಲಿತು 
ಒಳ್ಳೆಯ ಮನುಜೆ ನೀನಾಗಬೇಕು 
ಶಾಲೆಗೇ ಹೋಗಮ್ಮಾ ..ನೀನು ಶಾಲೆಗೇ ಹೋಗಮ್ಮಾ ।।


Friday, January 4, 2013

ವಧೂನ್ವೇಷಣೆ

ವಧೂನ್ವೇಷಣೆ 
ನನಗಾಗ ೨೧ರ ಸಂಭ್ರಮ.

ಶುಭ ಕೋರಲು ಕರೆ ಮಾಡಿದ್ದ ಗೆಳೆಯ ಕೇಳಿದ "ಏನೋ ನಿನ್ birthday resolutions?". ನಾ ನುಲಿಯದೇ ನುಡಿದೆ "ಮದುವೆ ಆಗ್ಬೇಕು ಅಂತ ಇದೀನಿ". ಅವ ನಕ್ಕು ಮಾತು ಮುಂದುವರಿಸಿದ "ಇನ್ನೂ settle ಆಗಿಲ್ಲ. ಇಷ್ಟು ಬೇಗ ಮದುವೆ ಆಗೋದು ತಪ್ಪು". ಅದಕ್ಕೆ ನನ್ನ ವಾಗ್ಬಾಣ "ಹಾಗಿದ್ರೆ ಭಾರತದ ಸಂವಿಧಾನ ಮದುವೆ ಯೋಗ್ಯ ವಯಸ್ಸು ೨೧ ಅಂತ ಯಾಕ್ ಮಾಡಿದೆ".

ಪ್ರೌಡಾವಸ್ಥೆಯಲ್ಲೂ ಶೈವಾವಸ್ಥೆಯಲ್ಲಿ ಇರಬಹುದಾದ ಆಲೋಚನೆ ಅಂದ್ರೆ ಅದು ಮದುವೆ ಬಗ್ಗೆನೇ. ಪ್ರೀತಿ ಮಾಡದ, ಮಾಡಿಯೂ ಹೇಳದ, ಹೇಳಿಯೂ ಕೈಗೂಡದ ಸಂಗಾತಿ ವಂಚಿತರಿಗೆ, "ನನ್ ಮದುವೆ ಹಿಂಗ್ ಆಗ್ಬೇಕು;ನನ್ನೋಳ್ ಹಿಂಗ್ ಇರ್ಬೇಕು;ಅವ್ಳ್ ಹಿಂಗ್ ಅಂದಾಗ ನಾನ್ ಹಾಂಗ್ ಅಂದ್ ಅವ್ಳ್ ನಗೋಂಗ್ ಮಾಡ್ಬೇಕು & ಅವ್ಳ್ ನಗೂನೆ ನಾನ್ ನೋಡ್ಬೇಕು" ಎಂಬ ಇತ್ಯಾದಿ ಆಲೋಚನೆಗಳೇ, ಏಕಾಂತದೀ ರಮಿಸೋ ಸ್ವಪ್ನಾಮಣಿಗಳು. 

ಸಾಂಪ್ರದಾಯಕ ಮದುವೆಗೆ ಶರಣು ಹೋಗುವ ಪ್ರತಿ ಕನ್ಯಾರ್ಥಿಗೆ ಧುತ್ತನೆ ಎದುರುಗೊಳ್ಳುವ ಪೆಡಂಭೂತವೇ "ನಿಂಗ್ ಈ ಹುಡುಗಿ ಒಪ್ಪಿಗೆ ನಾ?" ಎಂಬ ಪ್ರಶ್ನೆ. ತಾನು ಅಲ್ಲಿಯ ತನಕ ಪೋಷಿಸಿಕೊಂಡು ಬಂದ ಸುಕಲ್ಪನೆಗೂ, ಕಣ್ ಮುಂದಣ ಹುಡುಗಿಯ ನೈಜ್ಯ ಚಿತ್ರಣಕ್ಕೂ ನಡುವಿನ ಕಂದಕದ ಮೇಲೆ, ಆತನ ನಿರ್ಧಾರ ನಿಂತುರುತ್ತದೆ. ಅಂತರ ಎಷ್ಟು ಕಮ್ಮಿಯೋ ಅಷ್ಟು ತ್ವರಿತ ಆತನ ಅಂತಿಮವಲ್ಲದ ಅಂಗೀಕಾರ. ಯುವಕ ಆತನ ಜೀವನದಲ್ಲಿ ಮಾಡುವ ಏಕೈಕ ಕಲ್ಪನಾನ್ವೇಷಣೆಯೇ 'ವಧೂನ್ವೇಷಣೆ'.

 ಒಬ್ಬನ ಕಲ್ಪನೆ , ಇನ್ನೊಬ್ಬನಿಗೆ ಹಾಸ್ಯಾಸ್ಪದ ; ಅದರಲ್ಲೂ ಕಟು ವಾಸ್ತವಕ್ಕಿಂತ ಗ್ರಹಾಂತರ ದೂರದಲ್ಲಿರುವ ಕಲ್ಪನೆಗಳಿಗಂತೂ ಅವಹೇಳನವೇ ಮೊದಲ ಮಿತ್ರ. ಆದರೂ ಕಲ್ಪನೆಯ ಸುತ್ತ ಮೇಣದ ಕೋಟೆ ಕಟ್ಟಿ ಅದನ್ನು ಸ್ವಯಂ ಕಾವಲು ಕಾಯುವ ಯೋಧರಾಗುವುದಕ್ಕೆ ಕೆಲವರಿಗೆ ಸಾಧ್ಯ. ಅವಹೇಳನ ಮಾಡುವ ಮಂದಿಗೆ ಮಾತಿನಲ್ಲೇ ಏಟು ಕೊಡುವುದಕ್ಕೆ ಹೊಂಚು ಹಾಕುತ್ತಾರೆ. ಅಂತದ್ದೇ ಒಂದು ಪ್ರಸಂಗ, ಕೆಳಗಿನ ಕವಿತೆಗೆ ಸ್ಫೂರ್ತಿ. ಕುಚೋದ್ಯ ಮಾಡಿದ ಸಹೋದ್ಯೋಗಿ ಕನ್ನಡೇತರ ಆಗಿದ್ದರಿಂದ, ಪದ್ಯವೂ ಅಂಗ್ಲ ಮಾಧ್ಯಮದ್ದಾಯಿತು;ಸವಿಗನ್ನಡ ಸುಪ್ತವಾಯಿತು.


From Rainbow, should she hail
Passion be her style
Such be her character, WITHOUT FAIL

Day to day, she should look more brighter
Cheerful she should be forever
For her beauty, moon should be a follower

Stars twinkle, smiles she whenever
Pearls fallout, cries she however
Problems auto-resolved, complains she whatever

Cuteness of my girl should always sizzle
When I meet her, flowers should drizzle


ಬಾಳಿನಲ್ಲಿ ಕನ್ಯಾಶೋಧಕ್ಕೆ ಅಣಿಯಾಗಿರುವ ನನ್ನ ಸ್ನೇಹಿತರೇ, ಕಲ್ಪನೆಗಳಿಲ್ಲದ ಬಾಳು ನಿಸ್ಸಾರ. ಆಸೆಯಿಂದೊದಗುವ ದುಃಖಕ್ಕೆ ಅಂಜದೇ, ವಧೂನ್ವೇಷಣಾ ಪರ್ವದ ಪ್ರತಿ ಮಜಲನ್ನು ಆತುರ ತೋರದೆ ಅನುಭವಿಸಿ. ಕಲ್ಪನೆಗಳು ಸಾಕಾರಗೊಳ್ಳುವವೋ ಇಲ್ಲವೋ, ಆದರದು ನಮ್ಮನ್ನು ಮನುಷ್ಯರನ್ನಾಗಿ ಉಳಿಸುತ್ತದೆ. 


ಎಲ್ಲರಿಗೂ ಕಲ್ಯಾಣವಾಗಲಿ .

Good bye Mail @ Infosys

I
WHEN
SINCE 5 YE
PART OFMY L
I WOULD MISSI
OK. TODAY IS MY LAST DAY AT INFOSYS.
 
My mail ID, PAVAN_HK@INFOSYS.COM, functioning since 5.25 years, wouldn’t be functioning from tomorrow for obvious reasons. Kindly use pavan.hodrali@gmail.com OR pavan.hodrali@facebook.com   instead.


ashTe,
Mobile: +91 9844 843 371