Sunday, July 7, 2024

ಅಮ್ಮನ ನೆನಪು

 *ಅಮ್ಮನ ನೆನಪು* 


ಸೂತಕ ಸರಿಸದೇ ನೇಸರನು

ದಿನಚರಿಯಂತೆ ಬಂದಿರುವ

ಜನನಿ ಇಲ್ಲದ ಜನುಮದಿನವನು 

ಮೊದಲನೇ ಬಾರಿಗೆ ತಂದಿರುವ...


ನೋವನು ನುಂಗಿ ಹಡೆದಳು ಮಾತೆ

ಒಲವಿನ ಮಳೆಯ ಸುರಿಸಿದಳು

ಮಮತೆಯ ಮಡಿಲನು ಆಸನಗೊಳಿಸಿ

ರಾಜನಂತೆಯೇ ಮೆರೆಸಿದಳು

ನ್ಯೂನತೆಯನ್ನು ಮರೆಸಿದಳು


ತಾಯಿಯ ಋಣವನು ತೀರಿಸುವಷ್ಟು 

ಯಾರೂ ಇಲ್ಲ ಶ್ರೀಮಂತ

ಪಾತ್ರವ ಮುಗಿಸಿ ಹೊರಟಳು ಅಮ್ಮ

ಇನ್ನು 

ನೆನಪುಗಳಲ್ಲಿ ಜೀವಂತ...