Since the trip of pondicherry, I wanted to write Kannada version for the song 'Tum hi ho' from aashique 2, not because the song was good, but because it looked easy in beginning.
Below is not a great one, but definitely not the as-is translation of the song. Eventhough original song intended to show the affection, my version turned out to show the pain of separation.
ನಿನ್ನಾ ವಿನಹ ಕಾಡಿದೆ ವಿರಹ
ಕಾಡದೆ ಸನಿಹಕೆ ಬಾರೆ ಸಖಿ
ಮನದಾ ಪುಟದಲಿ ನಿನ್ನದೇ ಬರಹ
ಪಠಿಸುತ ಒಮ್ಮೆಲೆ ಆದೆ ಸುಖಿ
ಸೊರಗಿದೆ ಈ ಹೂಮನ
ಬಯಸುತ ನಿನ್ನ ತಂಪನ
ನಡುಗಿದೆ ನನ್ನ ಮೈಮನ
ಕರುಣಿಸು ಆಲಿಂಗನ
ಬಾನಲಿ ಮೂಡಿದ ನಕ್ಷತ್ರದಲಿ
ನಿನ್ನಯ ವದನ ಕಾಣುತಿದೆ
ತೋಳಲಿ ನಿನ್ನ ಬಳಸುವೆನೆಂದು
ನನ್ನಯ ಕರವು ಬೇಡುತಿದೆ
ಉಸಿರಲಿ ನಿನ್ನ ಹೆಸರಿರುವಾಗ
ಮರೆಯಲಿ ಹೇಗೆ ನಿನ್ನಾ
ಸೊರಗಿದೆ ಈ ಹೂಮನ
ಬಯಸುತ ನಿನ್ನ ತಂಪನ
ನಡುಗಿದೆ ನನ್ನ ಮೈಮನ
ಕರುಣಿಸು ಆಲಿಂಗನ
ಕಂಗೆಟ್ಟಿಹೆ ಅನು ಕ್ಷಣವು ನೀ ಬಾರದೆ ಬಡಿಯುತ್ತಿದೆ ನನ್ನ
ಹೃದಯವು ನಿನ್ನ ಗಾನ ಬೆಂಬಿಡದೆ ಬಯಸುತ್ತ ನಿನ್ನ
ಬಳಿ ಬಾ ಗೆಳತಿ ನಾ ಚಡಪಡಿಸಿಹೆನು
ಸುರಿಸು ಅನುರಾಗವ
ಕೇಳೆನು, ನಾ ತಾಳೆನು
ಅನುತಾಪವ ನಾ ಸಹಿಸೆನು
ಹೃದಯವು ಹಾಳಾಗಿದೆ
ಸರಿಪಡಿಸುನೀಡಿ ನೀ ಒಲವನು
ಸೊರಗಿದೆ ಈ ಹೂಮನ
ಬಯಸುತ ನಿನ್ನ ತಂಪನ
ನಡುಗಿದೆ ನನ್ನ ಮೈಮನ
ಕರುಣಿಸು ಆಲಿಂಗನ